2026ರ T20 ವಿಶ್ವಕಪ್ ಗೆಲುವಿನ ವಿಜಯೋತ್ಸವದಲ್ಲಿ ತಿಲಕ್ ವರ್ಮಾ ರಾಷ್ಟ್ರಧ್ವಜಕ್ಕೆ ತೋರಿದ ಗೌರವ ಅಭಿಮಾನಿಗಳ ಮನ ಗೆದ್ದಿದೆ. ಅಹಮದಾಬಾದ್ನಲ್ಲಿ ಭಾರತ ಗೆದ್ದ ನಂತರ, ವಿಜಯೋತ್ಸವದ ವೇಳೆ ಆಕಸ್ಮಿಕವಾಗಿ ಕೈಯಿಂದ ಜಾರಿದ ತ್ರಿವರ್ಣ ಧ್ವಜವನ್ನು ತಿಲಕ್ ತಮ್ಮ ಹಣೆಗೆ ಒತ್ತಿ, ಕ್ಷಮೆ ಯಾಚಿಸುವಂತೆ ಭಕ್ತಿಪೂರ್ವಕವಾಗಿ ನಮಿಸಿದರು. ಈ ಹೃದಯಸ್ಪರ್ಶಿ ಘಟನೆ ಭಾರತದ ಪ್ರತಿಯೊಬ್ಬ ನಾಗರಿಕನ ದೇಶಪ್ರೇಮಕ್ಕೆ ಸಾಕ್ಷಿಯಾಗಿದೆ.