ಬೆಳಗ್ಗೆ ತಿಂಡಿಗೆ ಯಾವ ರೀತಿಯ ಆಹಾರ ಸೇವನೆ ಮಾಡುವುದು ಎಂಬುದು ಹಲವರ ಗೊಂದಲ. ಅದರಲ್ಲಿಯೂ ತಿಂಡಿ ಫಿಟ್ನೆಸ್ ಪ್ರೀಯರಿಗೆ ಇಷ್ಟವಾಗಬೇಕು ಅಂದ್ರೆ ಅದು ಬಹಳ ಕಷ್ಟ. ಇಂತಹ ಸಮಸ್ಯೆಗೆ ಟೊಮೆಟೊ ಪೋಹಾ ಉತ್ತಮ ಆಹಾರ. ಪ್ರೋಟೀನ್ ವರ್ಧಿತವಾಗಿದ್ದು ಬೆಳಗ್ಗಿನ ತಿಂಡಿಗೆ ಬಹಳ ಸೂಕ್ತ ಆಹಾರವಾಗಿದೆ. ಜೊತೆಗೆ ಆರೋಗ್ಯಕರ ಉಪಹಾರಗಳು ನೀರಸವಾಗಿರುತ್ತದೆ ಎಂಬುದು ಸುಳ್ಳು. ಏಕೆಂದರೆ ಕೇವಲ ಕೆಲವೇ ಕೆಲವು ಪದಾರ್ಥಗಳನ್ನು ಇದನ್ನು ತಯಾರಿಸಬಹುದಾಗಿದ್ದು ರುಚಿ ಕೂಡ ಬಹಳ ಚೆನ್ನಾಗಿರುತ್ತದೆ. ಹಾಗದರೆ ಇನ್ನೇಕೆ ತಡ ಒಮ್ಮೆ ನೀವು ಕೂಡ ಮನೆಯಲ್ಲಿ ಟ್ರೈ ಮಾಡಿ ನೋಡಿ.