ನ್ಯೂಇಯರ್ ಸೆಲೆಬ್ರೇಷನ್ ಮುಗಿಸಿ ಜನರು ವಾಪಸಾಗುತ್ತಿರುವ ಹಿನ್ನೆಲೆ ಬೆಂಗಳೂರು-ಚಿಕ್ಕಬಳ್ಳಾಪುರ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ಜಾಮ್ ಉಂಟಾಗಿದೆ. ದೇವನಹಳ್ಳಿ ಹೊರವಲಯದ ರಾಣಿಕ್ರಾಸ್ ಬಳಿ ವಾಹನಗಳು ಸಾಲು ನಿಂತಿದ್ದು, 6 ಕಿ.ಮೀ.ಗೂ ಹೆಚ್ಚು ಸಂಚಾರ ದಟ್ಟಣೆ ಉಂಟಾಗಿದೆ. ಸುಗಮ ಸಂಚಾರಕ್ಕೆ ಅನುವು ಮಾಡಕೊಡಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.