ಬೆಂಗಳೂರಿನ ಕೆಆರ್ಪುರ-ಬಾಗಲೂರು ಮುಖ್ಯ ರಸ್ತೆಯಲ್ಲಿ 15 ವರ್ಷದ ಏರುಷ್ ಎಂಬ ಬಾಲಕ ರಸ್ತೆ ದಾಟುವಾಗ ತಲೆ ಸುತ್ತಿ ಬಿದ್ದು ಖಾಸಗಿ ಬಸ್ಗೆ ಸಿಲುಕಿ ಮೃತಪಟ್ಟಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಐದಾರು ತಿಂಗಳಿಂದ ಕಾಮಗಾರಿ ಮುಗಿಯದ ರಸ್ತೆ ಪರಿಸ್ಥಿತಿಯೇ ಈ ದುರಂತಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.