ನವವಿವಾಹಿತೆಯೋರ್ವರು ಮೈಸೂರಿನ ಆರ್.ಟಿ. ನಗರ ಸಮೀಪ ನಡೆದ ದ್ವಿಚಕ್ರ ವಾಹನ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೇವಲ 15 ದಿನಗಳ ಹಿಂದಷ್ಟೇ ವಿವಾಹವಾಗಿದ್ದ 20 ವರ್ಷದ ಮೇಘನಾ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಸ್ಕಿಡ್ ಆಗಿದೆ. ಹೆಲ್ಮೆಟ್ ಧರಿಸದ ಕಾರಣವೇ ಗಂಭೀರ ಗಾಯಗಳಾಗಿ ಮೇಘನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಪೊಲೀಸ್ ವರದಿಗಳು ತಿಳಿಸಿವೆ.