ಸಂಪ್ಗೆ ಬಿದ್ದು ಎರಡೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಅಣ್ಣಯ್ಯ, ಋತು ದಂಪತಿಯ ಬಾಲಕ ಚಿರಾಗ್ ಮೃತ ದುರ್ದೈವಿಯಾಗಿದ್ದು, ನಿನ್ನೆ ಕಾರು ತೊಳೆಯಲು ಮನೆಯ ಸಂಪ್ನ ಅಣ್ಣಯ್ಯ ಓಪನ್ ಮಾಡಿದ್ದರು. ಆದರೆ ಅದನ್ನು ಕ್ಲೋಸ್ ಮಾಡದೆ ಹಾಗೇ ಬಿಟ್ಟ ಪರಿಣಾಮ, ಆಟವಾಡುತ್ತಿದ್ದ ಚಿರಾಗ್ ಸಂಪಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.