ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಕೆರೆಯಲ್ಲಿ ಮೇಕೆ ಮೇಯಿಸಲು ಹೋಗಿದ್ದ ಅಕ್ಕ-ತಮ್ಮ ನೀರು ಪಾಲಾಗಿದ್ದಾರೆ. ರಜೆ ಹಿನ್ನೆಲೆಯಲ್ಲಿ ತೆರಳಿದ್ದ 11 ವರ್ಷದ ಸುಚೀತಾ ಮತ್ತು 9 ವರ್ಷದ ರವೀಂದ್ರ ಮೃತಪಟ್ಟವರು. ತಮ್ಮನನ್ನು ರಕ್ಷಿಸಲು ಹೋಗಿ ಅಕ್ಕ ಸುಚೀತಾ ಕೂಡಾ ಜೀವ ಕಳೆದುಕೊಂಡಿದ್ದಾರೆ. ಈ ಘಟನೆ ಕಸಪುರ ಗ್ರಾಮದ ಮಂಜುನಾಥ್ ಅವರ ಕುಟುಂಬದಲ್ಲಿ ದುಃಖ ಮಡುಗಟ್ಟುವಂತೆ ಮಾಡಿದೆ.