ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಚೆನ್ನೈನ ಲೋಕಭವನದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅವರನ್ನು ಭೇಟಿ ಮಾಡಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಟಿವಿಕೆಗೆ 118 ಶಾಸಕರ ಬೆಂಬಲ ಇದೆ ಎಂದು ಈ ವೇಳೆ ವಿಜಯ್ ರಾಜ್ಯಪಾಲರಿಗೆ ತಿಳಿಸಿದ್ದಾರೆಯಾದರೂ, ಕೇವಲ ಬಾಯಿ ಮಾತಿನಲ್ಲಿ ಹೇಳಿದ್ದಾರೆ. ಶಾಸಕರ ಬೆಂಬಲದ ಬಗ್ಗೆ ರಾಜ್ಯಪಾಲರಿಗೆ ಯಾವುದೇ ಪತ್ರವನ್ನು ವಿಜಯ್ ನೀಡಿಲ್ಲ ಎನ್ನಲಾಗಿದೆ.