ದಾವಣಗೆರೆ ತಾಲೂಕಿನ ನಾಗರಕಟ್ಟೆ ಹಾಗೂ ದಾವಣಗೆರೆ ನಗರದ ಶನೇಶ್ವರನ ದೇವಸ್ಥಾನಗಳಲ್ಲಿ ನಾಗರ ಹಾವು ಕಾಣಿಸಿಕೊಂಡ ಪರಿಣಾಮ ಸ್ಥಳೀಯರು ಕಂಗಾಲಾದ ಪ್ರಸಂಗ ನಡೆದಿದೆ. ಹಾವುಗಳನ್ನು ಕೆಲ ಕಾಲ ಕಸರತ್ತು ನಡೆಸಿ ಸ್ನೇಕ್ ಬಸಣ್ಣ ರಕ್ಷಣೆ ಮಾಡಿದ್ದು, ಹಾವುಗಳ ಸೆರೆಯಿಂದ ಆಸುಪಾಸಿನ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.