ನೇಪಾಳ ಮತ್ತು ಚೀನಾ ಗಡಿ ಭಾಗದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಹಿಮನದಿ ಕುಸಿತ ಹಾಗೂ ಜಲಪ್ರಳಯದ ವೇಳೆ, ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಸಿಲುಕಿಕೊಂಡಿದ್ದ 8 ಮಂದಿ ಕಾರ್ಮಿಕರು ಭಾರಿ ಸವಾಲುಗಳ ನಡುವೆ 9 ದಿನಗಳ ಕಾಲ ಬದುಕುಳಿದು ಸುರಕ್ಷಿತವಾಗಿ ಹೊರಬಂದಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆ ಪ್ರಪಂಚದಾದ್ಯಂತ ಭಾರಿ ಗಮನ ಸೆಳೆದಿದೆ. ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ಸಂಪೂರ್ಣ ಕತ್ತಲಾವರಿಸಿತ್ತು. ಕೇವಲ ಸುರಂಗದಲ್ಲಿದ್ದ ಸಣ್ಣ ಗಾಳಿಯ ಪೈಪ್ಗಳ ಮೂಲಕ ಲಭಿಸುತ್ತಿದ್ದ ಆಮ್ಲಜನಕ ಮತ್ತು ಹನಿ ಹನಿಯಾಗಿ ಸೋರುತ್ತಿದ್ದ ನೀರನ್ನು ಕುಡಿದು ಅವರು ಬದುಕಿದ್ದರು.