ಉಡುಪಿ ಜಿಲ್ಲೆಯ ಹೆಜಮಾಡಿ ಗರಡಿಯಲ್ಲಿ ನಡೆದ ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವದ ವೇಳೆ ವೃದ್ಧೆಯ ಚಿನ್ನದ ಸರ ಕಳ್ಳತನವಾಗಿದೆ. ಮೂವರು ಮಹಿಳಾ ಕಳ್ಳಿಯರು ವೃದ್ಧೆಯನ್ನು ಸುತ್ತುವರಿದು, 2 ಲಕ್ಷ ಮೌಲ್ಯದ ಸರವನ್ನು ಎಗರಿಸಿದ್ದಾರೆ. ಈ ಕಳ್ಳತನದ ಕೃತ್ಯ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಡುಬಿದ್ರಿ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.