ಸಾಮಾನ್ಯವಾಗಿ ಗರ್ಭಿಣಿಯರಿಗೆ ಯಾವಾಗ ಯಾವ ಸ್ಕ್ಯಾನ್ ಮಾಡಿಸಬೇಕು ಎಂಬುದು ತಿಳಿದಿರುವುದಿಲ್ಲ. ಆದರೆ ಡಾ. ಸಂಜನಾ ಹಿತೇಶ್ ಅವರು ತಮ್ಮ ಇನ್ಸ್ಟಾ ಖಾತೆ bharathiclinic_hassan ಯಲ್ಲಿ ಇವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದು, ಎಷ್ಟನೇ ವಾರಕ್ಕೆ ಯಾವ ಸ್ಕ್ಯಾನ್ ಮಾಡಿಸಬೇಕು, ಅದರಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಈ ವಿಡಿಯೋ ತಾಯಿಯಾಗುತ್ತಿರುವ ಎಲ್ಲರಿಗೂ ಬಹಳ ಅನುಕೂಲಕರವಾಗಿದ್ದು, ಯಾವ ಸಮಯದಲ್ಲಿ ಏನು ಮಾಡಿಸಬೇಕು ಎಂಬುದು ತಿಳಿಯುತ್ತದೆ. ಅಷ್ಟು ಮಾತ್ರವಲ್ಲ, ಈ ಸ್ಕ್ಯಾನ್ ಮಾಡಿಸುವುದರಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ಕೂಡ ಈ ವಿಡಿಯೋ ಮೂಲಕ ತಿಳಿಯಬಹುದು.