ಕೊಪ್ಪಳದಲ್ಲಿ ಬೇಸಿಗೆಯಲ್ಲೂ ದಟ್ಟ ಮಂಜು ಆವರಿಸಿದ್ದು, ವಾತಾವರಣ ಕಾಶ್ಮೀರದಂತೆ ಭಾಸವಾಗಿದೆ. ಬೆಳಗ್ಗೆ ಗವಿಮಠದಂತಹ ಪ್ರದೇಶಗಳಲ್ಲಿ ಸೂರ್ಯನ ದರ್ಶನವಾಗದೆ ಚಳಿ ವಾತಾವರಣ ಕಂಡುಬಂತು. ವಾಹನ ಸವಾರರಿಗೆ ರಸ್ತೆ ಕಾಣದೆ ಸಂಚಾರಕ್ಕೆ ಅಡಚಣೆಯಾಗಿದ್ದು, ಜನರು ಮಲೆನಾಡ ರೀತಿಯ ವಾತಾವಾರಣ ಕಂಡುಬಂದಿರೋದಾಗಿ ಅನುಭವ ಹಂಚಿಕೊಂಡಿದ್ದಾರೆ.