ಅಮೆರಿಕ–ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಪರಿಣಾಮ ಇಂಧನ ಕೊರತೆ ಉಂಟಾಗಬಹುದು ಎಂಬ ವದಂತಿ ಚಾಮರಾಜನಗರ ಜಿಲ್ಲೆಯಲ್ಲಿ ಆತಂಕ ಹುಟ್ಟಿಸಿದೆ. ಚಾಮರಾಜನಗರ ಮತ್ತು ಕೊಳ್ಳೇಗಾಲ ಪಟ್ಟಣಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ ಎಂಬ ಭಯದಿಂದ ವಾಹನ ಸವಾರರು ಬಂಕ್ಗಳಿಗೆ ಮುಗಿಬಿದ್ದಿದ್ದಾರೆ. ಹಲವು ಪೆಟ್ರೋಲ್ ಬಂಕ್ಗಳಲ್ಲಿ ದೀರ್ಘ ಸಾಲುಗಳು ಕಂಡುಬಂದಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಖರೀದಿ ಜೋರಾಗಿದೆ. ಬಂಕ್ ಸಿಬ್ಬಂದಿ ಇಂಧನ ಲಭ್ಯವಿದೆ ಎಂದು ತಿಳಿಸಿದರೂ ಜನರು ನಂಬದೆ ಹೆಚ್ಚಾಗಿ ಸಂಗ್ರಹಿಸಲು ಮುಂದಾಗಿದ್ದಾರೆ. ವದಂತಿಯಿಂದ ತಾತ್ಕಾಲಿಕ ಗೊಂದಲ ಉಂಟಾಗಿದೆ.