ಇಸ್ರೇಲ್ಗೆ ಅಮೆರಿಕದ ಭಾರಿ ಯುದ್ಧ ವಿಮಾನಗಳು, ಶಸ್ತ್ರಾಸ್ತ್ರಗಳು ಹಾಗೂ ಪ್ಯಾರಾ ಟ್ರೂಪರ್ಗಳು ಆಗಮಿಸಿವೆ. ಬೆನ್ ಗುರಿಯಾನ್ ಏರ್ಪೋರ್ಟ್ನಲ್ಲಿ ಯುದ್ಧ ವಿಮಾನಗಳು ಮತ್ತು ಟ್ಯಾಂಕರ್ಗಳು ಸಜ್ಜಾಗಿ ನಿಂತಿವೆ. ಇರಾನ್ ಜೊತೆಗಿನ ಸಂಧಾನ ವಿಫಲವಾದ ಬೆನ್ನಲ್ಲೇ ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಲು ಸಿದ್ಧವಾಗಿದೆಯೇ ಎಂಬ ಪ್ರಶ್ನೆ ಮೂಡಿದೆ. ಯಾವುದೇ ಕ್ಷಣದಲ್ಲಿ ಅಮೆರಿಕ ಇರಾನ್ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ.