ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಇದರ ಪರಿಣಾಮವಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಫಾಲ್ಸ್ಗೆ ಜೀವಕಳೆ ಬಂದಿದೆ. ಸುಮಾರು 600 ಅಡಿಗೂ ಎತ್ತರದಿಂದ ಮೈದುಂಬಿ ಧುಮುಕುತ್ತಿದೆ. ಜಲಪಾತದ ರುದ್ರ ನರ್ತನ ನೋಡುಗರ ಪಾಲಿಗೆ ಹೊಸದೊಂದು ದೃಶ್ಯ-ಕಾವ್ಯವನ್ನೇ ಸೃಷ್ಟಿಮಾಡಿದೆ.