ವಾರಾಣಸಿಯಲ್ಲಿ ಅತ್ಯಂತ ವಿಚಿತ್ರ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬ ಕೆಟಿಎಂ ಬೈಕ್ ಶೋರೂಮ್ ಒಂದರಲ್ಲಿ ಸುಮಾರು 4 ಗಂಟೆಗಳಿಗೂ ಹೆಚ್ಚು ಕಾಲ ಕಳೆದು, ಕೊನೆಗೆ 5 ಲಕ್ಷ ರೂ. ಮೌಲ್ಯದ ಬೈಕ್ನೊಂದಿಗೆ ಪರಾರಿಯಾಗಿದ್ದಾನೆ. ಈ ಘಟನೆಯ ಸಿಸಿಟಿವಿ (CCTV) ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಿಸಿಟಿವಿ ವಿಡಿಯೋದಲ್ಲಿ, ಆ ವ್ಯಕ್ತಿ ಶೋರೂಮ್ ಒಳಗಡೆ ಬಾಲಿವುಡ್ನ ಪ್ರಸಿದ್ಧ "ಲುಂಗಿ ಡ್ಯಾನ್ಸ್" ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ.