ರೀಲ್ಸ್ ಮಾಡುವಾಗ ಯುವತಿಯೊಬ್ಬಳು ಆಯತಪ್ಪು ಚರಂಡಿಗೆ ಬಿದ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ನಜಾಫ್ಗಢದಲ್ಲಿ ಘಟನೆ ನಡೆದಿದೆ. ಆದರೆ ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಸಹಾಯ ಮಾಡಿ ಆಕೆಯನ್ನು ಸುರಕ್ಷಿತವಾಗಿ ಹೊರಗೆ ಎಳೆದಿದ್ದಾರೆ. ಭಾವನಾ ಎಂಬಾಕೆ ರೀಲ್ಸ್ ಮಾಡುವಾಗ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದ್ದಳು. ಸೊಂಟದವರೆಗೆ ನೀರಿತ್ತು. ದೆಹಲಿ ಪೊಲೀಸರು ಹಂಚಿಕೊಂಡ ವೀಡಿಯೊದಲ್ಲಿ ಅಧಿಕಾರಿಯೊಬ್ಬರು ಹಗ್ಗವನ್ನು ಬಳಸಿ ಚರಂಡಿಯಿಂದ ಎಚ್ಚರಿಕೆಯಿಂದ ಮೇಲಕ್ಕೆತ್ತುವುದನ್ನು ಕಾಣಬಹುದು.