ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ವ್ಯಸನಿಯೊಬ್ಬ ಮೊಬೈಲ್ ಟವರ್ ಏರಿ ಮದ್ಯಕ್ಕಾಗಿ ಹಠ ಹಿಡಿದಿದ್ದಾನೆ. ಶ್ರೀಶೈಲ್ ಹೆಸರಿನ ಈ ವ್ಯಕ್ತಿ ಕಳೆದ ಎರಡು ವರ್ಷಗಳಲ್ಲಿ ಎರಡನೇ ಬಾರಿಗೆ ಇಂತಹ ಹುಚ್ಚಾಟ ನಡೆಸಿದ್ದಾನೆ. ಮದ್ಯ ಸಿಕ್ಕರೆ ಮಾತ್ರ ಕೆಳಗಿಳಿಯುವುದಾಗಿ ಹಠ ಹಿಡಿದಿದ್ದು, ಸ್ಥಳಕ್ಕೆ ತಿಕೋಟ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.