ಪ್ರಸ್ತುತ ಅಯ್ಯಪ್ಪ ಮಾಲೆ ಋತುವಿನಲ್ಲಿ, ಶಬರಿಮಲೆ ಯಾತ್ರೆಗೆ ದೇಶಾದ್ಯಂತ ಭಕ್ತರು ಆಗಮಿಸುತ್ತಿದ್ದಾರೆ. ಇದೀಗ ಅಯ್ಯಪ್ಪ ಮಾಲೆಧಾರಿಗಳ ಭವ್ಯ ಶಬರಿಮಲೆ ಪ್ರಯಾಣದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ವಿಶೇಷ ವಿಡಿಯೋದಲ್ಲಿ, ಭಕ್ತರು ಅದ್ದೂರಿಯಾಗಿ ಸ್ವಾಮಿ ದರ್ಶನಕ್ಕೆ ತೆರಳುತ್ತಿರುವುದನ್ನು ಕಾಣಬಹುದು. ಈ ಯಾತ್ರೆಯ ವೈಭವವನ್ನು ಈ ವಿಡಿಯೋ ಸಾದರಪಡಿಸುತ್ತದೆ.