ಸದ್ಯ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಶೌಚಾಲಯದಲ್ಲಿದ್ದ ಯುವತಿಗೆ ಸ್ನೇಹಿತರು ವಿಚಿತ್ರ ಬರ್ತ್ಡೇ ಸರ್ಪ್ರೈಸ್ ನೀಡಿದ್ದಾರೆ. ಈ ಅನಿರೀಕ್ಷಿತ ಕ್ಷಣಕ್ಕೆ ನಗುತ್ತಲೇ ಕಿರುಚಿದ ಯುವತಿ, ಸ್ನೇಹಿತರನ್ನು ಹೊರಗೆ ಹೋಗುವಂತೆ ಹೇಳಿದ್ದಾಳೆ. ಚೀನಾ ಮೂಲದ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದು, 'ಸರ್ ಪ್ರೈಸ್ ಕೊಡೋಕೆ ಇದಕ್ಕಿಂತ ಒಳ್ಳೆ ಜಾಗ ಸಿಗಲಿಲ್ವಾ?' ಎಂದು ನೆಟ್ಟಿಗರು ಹಾಸ್ಯಮಯವಾಗಿ ಕಮೆಂಟ್ ಮಾಡಿದ್ದಾರೆ.