ಪ್ರತಿದಿನ ವಿವಿಧ ರೀತಿಯ ಸಿಹಿ ತಿಂಡಿಗಳನ್ನು ತಿನ್ನಬೇಕು ಎಂದು ಬಯಸುತ್ತೀರಾ? ಹಾಗಿದ್ರೆ ಬ್ರೆಡ್ ಬಳಸಿ ಸುಲಭವಾಗಿ ಗುಲಾಬ್ ಜಾಮೂನ್ ಮಾಡಿ ನೋಡಿ. ಇದು ಕೇಳುವುದಕ್ಕೆ ಸ್ವಲ್ಪ ಆಶ್ಚರ್ಯ ಎನಿಸಿದರೂ ಕೂಡ ಮಾಡುವುದಕ್ಕೆ ತುಂಬಾ ಸಿಂಪಲ್ ಆಗಿದೆ. ನಿಮಗೂ ಜಾಮೂನ್ ತಿನ್ನಬೇಕು ಅಂತಾ ಅನ್ನಿಸಿದಾಗ ಈ ವೈರಲ್ ರೆಸಿಪಿಯನ್ನು ಒಮ್ಮೆ ಮಾಡಿ ನೋಡಿ. ಈ ವಿಡಿಯೋವನ್ನು munchieswithmili ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಬಾರಿ ವೈರಲ್ ಆಗಿದೆ. ಇನ್ನೇಕೆ ತಡ ನೀವು ಒಮ್ಮೆ ಮಾಡಿ ನೋಡಿ.