ಮಕ್ಕಳ ತುಂಟಾಟ ಸಾಮಾಜಿಕ ಜಾಲತಾಣದಲ್ಲಿ ಆಗ್ಗಾಗೆ ವೈರಲ್ ಆಗುತ್ತದೆ. ಇತ್ತೀಚೆಗೆ ಜಾತ್ರೆಗೆ ಬಂದಿದ್ದ ತಟ್ಟಿರಾಯನಿಗೆ ಪುಟ್ಟ ಮಕ್ಕಳು ಕ್ವಾಟ್ಲೆ ಕೊಟ್ಟಿರುವ ವಿಡಿಯೋ ಭಾರೀ ವೈರಲ್ ಆಗಿದೆ. ತಟ್ಟಿರಾಯನ ಬೊಂಬೆಯೊಳಗೆ ಹೋಗಿ ತರ್ಲೆ ಮಾಡುತ್ತಿರುವ ಮಕ್ಕಳ ಈ ಮುದ್ದಾದ ವಿಡಿಯೋವನ್ನು @all_ok_alok's ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದು ನೆಟ್ಟಿಗರ ಮನಸೂರೆಗೊಂಡಿದೆ.