ಮ್ಯಾಜಿಕ್ ಟೋಪಿಯಿಂದ ಹೊರಬರುವ ಪಾರಿವಾಳ ಅಥವಾ ಚೆಂಡು ಸಾಮಾನ್ಯ. ಆದರೆ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಜಾದೂಗಾರನ ಟೋಪಿಯಿಂದ ಸಾವಿರಾರು ಮೊಲಗಳು ಹೊರಬಂದು ವೇದಿಕೆಯನ್ನು ಆವರಿಸಿಕೊಂಡಿವೆ. ನಿರೀಕ್ಷೆಗೂ ಮೀರಿ ಮೊಲಗಳು ಬರುತ್ತಿದ್ದಂತೆ ಜಾದೂಗಾರನಿಗೆ ಅವುಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಅದ್ಭುತ ವಿಡಿಯೋ ಎಲ್ಲರ ಗಮನ ಸೆಳೆದಿದೆ.