ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಪೈಪ್ನಲ್ಲಿ ಸಿಲುಕಿದ ಪುಟ್ಟ ನಾಯಿಯನ್ನು ಪೊಲೀಸರು ಮಾನವೀಯತೆಯಿಂದ ರಕ್ಷಿಸಿದ್ದಾರೆ. ಮರಿಯನ್ನು ಕಳೆದುಕೊಂಡ ತಾಯಿ ನಾಯಿಯ ಒದ್ದಾಟ ನೋಡಿ, ಇಬ್ಬರು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಮರಿ ಶ್ವಾನವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಈ ಹೃದಯಸ್ಪರ್ಶಿ ಘಟನೆ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.