ಶಿವಮೊಗ್ಗ-ತೀರ್ಥಹಳ್ಳಿ ಹೆದ್ದಾರಿಯ ಮುಡುಬ ಬಳಿ ರಾತ್ರಿ ವೇಳೆಯಲ್ಲಿ ಕಾಣಿಸಿಕೊಂಡ ಪುಟ್ಟ ಕಾಡಾನೆ ಮರಿಯೊಂದು ರಸ್ತೆ ಮಧ್ಯದಲ್ಲಿ ಕೆಲವು ಸಮಯ ಚಿನ್ನಾಟವಾಡಿದ್ದು, ಈ ಅಪರೂಪದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ನಿವೃತ್ತ ಪ್ರಾಂಶುಪಾಲ ಡಾ.ರಾಜಶೇಖರ ಅವರು ಈ ಮನಮೋಹಕ ಆನೆಯ ಚಿನ್ನಾಟದ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.