ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಭದ್ರಾ ಅಭಯಾರಣ್ಯ ಸಮೀಪ ಇರುವ ಕೆಮ್ಮಣ್ಣು ಗುಂಡಿಯಲ್ಲಿ ಜೀಪೊಂದಕ್ಕೆ ಅಡ್ಡಲಾಗಿ ಕರಡಿ ಕಾಣಸಿಕ್ಕಿದೆ. ಕಬ್ಬಿಣದ ಗ್ರೀಲ್ಸ್ ದಾಟಲು ಮುಂದಾಗ್ತಿದ್ದ ಕರಡಿ ವಾಹನದ ಲೈಟ್ ಕಾಣಿಸ್ತಾ ಇದ್ದಂತೆ ಮಣ್ಣಿನ ರಸ್ತೆಯಲ್ಲಿ ಮುಂದೆ ಓಡಿದ ವಿಡಿಯೋ ಈಗ ವೈರಲ್ ಆಗುತ್ತಿದೆ.