ಸಾಮಾಜಿಕ ಜಾಲತಾಣದಲ್ಲಿ ಆನೆ ಮತ್ತು ನಾಯಿಗಳ ವಿಡಿಯೋ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಈ ದೃಶ್ಯದಲ್ಲಿ ಆನೆಯೊಂದು ಗಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತದೆ. ಅದರ ಸುತ್ತ ನಾಯಿಗಳು ರಕ್ಷಣಾ ಸಿಬ್ಬಂದಿಗಳಂತೆ ನಡೆದು ಬರುತ್ತಿರುವುದು ವಿಶೇಷ. ಈ ಅಪರೂಪದ ಬಾಂಡಿಂಗ್ ನೆಟ್ಟಿಗರನ್ನು ಅಚ್ಚರಿಗೊಳಿಸಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ನಾಯಿಗಳ ಈ ನಿಷ್ಠೆ ಮತ್ತು ಆನೆಯ ಸೌಂದರ್ಯ ನೆಟ್ಟಿಗರ ಮನ ಗೆದ್ದಿದೆ.