ಕಟೀಲಿನಲ್ಲಿರುವ ಮಹಾಲಕ್ಷ್ಮೀ ಆನೆಗೆ ಯುವತಿಯೊಬ್ಬಳು 'ಹಾಯ್ ಆನೆ' ಎಂದು ಇಂಗ್ಲಿಷ್ನಲ್ಲಿ ಮಾತನಾಡಿಸಿದಾಗ, ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು 'ಆನೆಗೆ ಇಂಗ್ಲಿಷ್ ಬರುವುದಿಲ್ಲ' ಎಂದು ತುಳುವಿನಲ್ಲಿ ತಮಾಷೆಯಾಗಿ ಉತ್ತರಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನಗು ತರಿಸುವ ವಿಡಿಯೋವನ್ನು @Sandhya Gautham Devadiga ಅವರು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.