ಬೇಸಿಗೆಯ ಬಿಸಿಲಿನ ಬೇಗೆಗೆ ತತ್ತರಿಸಿದ ಬಂಡೀಪುರದ ಹುಲಿಯೊಂದು ಸಫಾರಿ ವಲಯದ ಅಟ್ಟಿಗಟ್ಟೆ ಎಂಬಲ್ಲಿ ಕೆರೆಗಿಳಿದು ಅರ್ಧ ಗಂಟೆಗೂ ಹೆಚ್ಚು ಕಾಲ ದೇಹವನ್ನು ತಂಪಾಗಿಸಿಕೊಂಡಿದೆ. ಪ್ರವಾಸಿಗರ ಕಣ್ಮುಂದೆಯೇ ಹುಲಿರಾಯ ಕೆರೆಯಲ್ಲಿ ರಿಲ್ಯಾಕ್ಸ್ ಮೂಡ್ಗೆ ಜಾರಿದ ಈ ಅಪರೂಪದ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.