ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಸೆಲೆಬ್ರಿಟಿ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ವೇಳೆ ಅನುಷ್ಕಾ ಶರ್ಮಾ ಆತುರದಲ್ಲಿ ತಮ್ಮ ಫೋನ್ ಅನ್ನು ಅಲ್ಲೇ ಮರೆತಿದ್ದಾರೆ. ಇದನ್ನು ಕಂಡ ವಿರಾಟ್ ಕೊಹ್ಲಿ ಮುಗ್ಧವಾಗಿ ನಕ್ಕಿದ್ದಾರೆ. ಪತ್ನಿಯ ಮರೆವು ಮತ್ತು ವಿರಾಟ್ ಅವರ ಕ್ಯೂಟ್ ನಗು 'ವಿರುಷ್ಕಾ' ಅಭಿಮಾನಿಗಳ ಮನ ಗೆದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.