ಸಚಿವ ಶಿವರಾಜ ತಂಗಡಗಿ ಮತ್ತು ಶಾಸಕ ಜನಾರ್ದನ ರೆಡ್ಡಿ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಪರಸ್ಪರ ವಾಗ್ದಾಳಿ ಮುಂದುವರಿದಿದೆ. "ಉಂಡ ಮನೆಗೆ ದ್ರೋಹ ಬಗೆದವನು ನೀನು" ಎಂದು ರೆಡ್ಡಿ ಬಗ್ಗೆ ತಂಗಡಗಿ ಆರೋಪಿಸಿದ್ದು, ಕಳ್ಳನಿಗೆ ತನ್ನ ನೆರಳೇ ಭಯ ಎಂಬಂತೆ, ನಿಮ್ಮ ಕರಾಳ ಕೆಲಸಗಳೇ ಇಂದು ನಿಮಗೆ ಕಾಡುತ್ತಿವೆ" ಎಂದು ಟೀಕಿಸಿದ್ದಾರೆ.