ಕೊಲ್ಕತ್ತಾದ ಆರ್ಜಿ ಕರ್ (RG Kar) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾಪದಲ್ಲಿ ಚರ್ಚಿಸುವಾಗ ಬಿಜೆಪಿ ಶಾಸಕಿ ರತ್ನಾ ದೇವನಾಥ್ ಅವರು ತೀವ್ರ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ತಮ್ಮ ಮಗಳು ಹಾಗೂ ಸಂತ್ರಸ್ತ ವೈದ್ಯೆಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಅವರು ಸದನದಲ್ಲಿ ಧ್ವನಿ ಎತ್ತಿದಾಗ ಇಡೀ ಸದನವೇ ಕೆಲವು ಕ್ಷಣ ಸ್ತಬ್ಧವಾಗಿತ್ತು.