ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಕಟ್ಟುನಿಟ್ಟಾಗಿ ನಿಷೇಧಿಸಲಾಗಿರುತ್ತದೆ. ವಿಶೇಷವಾಗಿ ಮುಗ್ಧ ಪ್ರಾಣಿಗಳು ಸುತ್ತಲೂ ಇರುವಾಗ ಹೆಚ್ಚು ಜಾಗರೂಕರಾಗಿರಬೇಕು. ಆದರೆ, ಕೆಲವರು ನಿಯಮಗಳನ್ನು ನಿರ್ಲಕ್ಷಿಸುವುದು ತಮ್ಮ ಹೆಮ್ಮೆ ಎಂದು ಪರಿಗಣಿಸುತ್ತಾರೆ. ನೀರಿನಲ್ಲಿ ಆಟವಾಡುತ್ತಿದ್ದ ಬೆಲುಗಾ ತಿಮಿಂಗಿಲವು ಸಿನಿಮೀಯ ಶೈಲಿಯಲ್ಲಿ ಒಬ್ಬಾತನಿಗೆ ಪಾಠ ಕಲಿಸಿತು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.