ಇಟಲಿಯಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿರುವುದಕ್ಕೆ ರೋಮ್ನಲ್ಲಿ ನಿನ್ನೆ ಸಂಜೆ ನಡೆದ ಭಾರತೀಯ ಸಮುದಾಯದ ಸ್ವಾಗತ ಸಮಾರಂಭವೇ ಸಾಕ್ಷಿಯಾಯಿತು. ಈ ವಿಶೇಷ ಸಂಜೆಯಲಿ ಐದು ಜನ ಪ್ರಸಿದ್ಧ ಇಟಾಲಿಯನ್ ಕಲಾವಿದರು ಒಟ್ಟಾಗಿ ಭಾರತೀಯ ಶಾಸ್ತ್ರೀಯ ಸಂಗೀತದ ಸುಂದರ ‘ಹಂಸಧ್ವನಿ’ ರಾಗವನ್ನು ಪ್ರಸ್ತುತಪಡಿಸಿ ನೆರೆದಿದ್ದವರ ಮನಗೆದ್ದರು.ಈ ವಿಡಿಯೋವನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.