ವ್ಯಕ್ತಿಯೋರ್ವ ಹಾಡಹಗಲೇ ಪತ್ನಿಯ ಕತ್ತು ಕೊಯ್ದು ಬಳಿಕ ಕಾರು ಹಾಯಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕಾರಿನಲ್ಲಿ ಕರೆದುಕೊಂಡು ಬಂದು ನಡು ರಸ್ತೆಯಲ್ಲೇ ಪತ್ನಿಯ ಕತ್ತು ಕೊಯ್ದಿದ್ದಾನೆ. ಬಳಿಕ ರಕ್ತಸಿಕ್ತದಲ್ಲಿ ತಪ್ಪಿಸಿಕೊಂಡು ಜಮೀನಿನಲ್ಲಿ ಓಡುತ್ತಿದ್ದ ಪತ್ನಿಗೆ ಕಾರಿನಿಂದ ಗುದ್ದಿ ಮೇಲೆ ಹಾಯಿಸಿ ಕೊಂದು ವಿಕೃತಿ ಮೆರೆದಿದ್ದಾನೆ. ಈ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಬಳೂರಗಿ ಗ್ರಾಮದ ಬಳಿ ನಡೆದಿದೆ.