ತುಮಕೂರು ಜಿಲ್ಲೆಯ ಹೆಬ್ಬೂರಿನಲ್ಲಿ ನಡೆದ ಪರಮೇಶ್ವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿ ಆಶಾ ತನ್ನ ಪ್ರಿಯಕರ ಜೊತೆ ಸೇರಿಕೊಂಡು ಗಂಡ ಪರಮೇಶ್ವರ್ನನ್ನು ಕೊಲೆ ಮಾಡಿರೋದು ಬಯಲಾಗಿದೆ. ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಸುಳ್ಳು ಹೇಳಿ ಅಂತ್ಯಕ್ರಿಯೆ ನಡೆಸಿ, 20 ದಿನದಲ್ಲೇ ಪ್ರಿಯಕರನೊಂದಿಗೆ ಈಕೆ ಮದುವೆಯಾಗಿದ್ದಳು. ಪೊಲೀಸರ ತನಿಖೆಯಿಂದ ಸತ್ಯಾಂಶ ಬಯಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.