ಚಾಮರಾಜನಗರ ಜಿಲ್ಲೆ ಗಡಿ ತಮಿಳುನಾಡು ರಸ್ತೆಯ ಅಸನೂರು ಮಾರ್ಗಮಧ್ಯೆ ಕಾಡಾನೆಯೊಂದು ನಡು ರಸ್ತೆಗೆ ಆಗಮಿಸಿ ಖಾಸಗಿ ಬಸ್ಸನ್ನೇ ಹಿಮ್ಮೆಟ್ಟಿಸಿದೆ. ಅಲ್ಲದೆ, ತುಸು ದೂರ ಬಸ್ಸನ್ನು ಅಟ್ಟಾಡಿಸುತ್ತಾ ಬಂದಿದೆ. ಘಟನೆಯ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.