ಚಿಕ್ಕಮಗಳೂರಿನ ಬಯಲುಸೀಮೆಯಲ್ಲಿಯೂ ಕಾಡಾನೆ ಉಪಟಳ ಜೋರಾಗಿದೆ. ತರೀಕೆರೆ ತಾಲೂಕಿನ ಕುಂದೂರು ಗ್ರಾಮದ ಸಮೀಪ ಕಾಡಾನೆಯೊಂದು ಕೃಷಿ ಭೂಮಿಗೆ ನುಗ್ಗಿದ್ದು, ರೈತರೇ ಅದನ್ನು ಓಡಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.