ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ 25ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿ, ವಾಸದ ಮನೆಗಳ ಮುಂದೆ ಹಾದುಹೋಗಿದೆ. ರಾತ್ರಿಯಿಡೀ ರೈತರ ಜಮೀನಿನಲ್ಲಿ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸಿದ ಈ ಗಜಪಡೆ ಬೆಳಿಗ್ಗೆ ಅರಣ್ಯ ಪ್ರದೇಶ ಸೇರಿದೆ. ಈ ಘಟನೆಯಿಂದ ಸ್ಥಳೀಯರಲ್ಲಿ ಭಾರಿ ಆತಂಕ ಉಂಟಾಗಿದ್ದು, ಜನ-ವನ್ಯಜೀವಿ ಸಂಘರ್ಷ ಮತ್ತಷ್ಟು ಹೆಚ್ಚಾಗಿದೆ.