ತಮಿಳುನಾಡಿನ ದಿಂಬಂ ಘಾಟ್ನಲ್ಲಿ ಕಾಡಾನೆಗಳ ಹಾವಳಿ ಮತ್ತೆ ಮುಂದುವರಿದಿದೆ. ಕಬ್ಬು ಮತ್ತು ಬಾಳೆ ಬೆಳೆಗಳಿಗಾಗಿ ಕಾಡಾನೆಗಳು ರಸ್ತೆಗೆ ಬಂದಿದ್ದು, ಲಾರಿ, ಗೂಡ್ಸ್ ವಾಹನಗಳನ್ನು ಅಡ್ಡಗಟ್ಟುತ್ತಿವೆ. ಕಳೆದ ತಿಂಗಳು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಕಾಡಿಗಟ್ಟಿದ್ದರು. ಆದರೂ ಮತ್ತೆ ರಸ್ತೆಗಿಳಿದಿರುವ ಗಜಪಡೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದೆ. ಇದು ಮಾನವ-ವನ್ಯಜೀವಿ ಸಂಘರ್ಷದ ತೀವ್ರತೆಯನ್ನು ಎತ್ತಿ ತೋರಿಸುತ್ತದೆ.