ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಭದ್ರಾ ಅಭಯಾರಣ್ಯ ವಲಯದ ಹೊನ್ನಾಳ ಗೇಟ್ ಸಮೀಪ ದೈತ್ಯ ಕಾಡಾನೆಯೊಂದು ಪ್ರತ್ಯಕ್ಷವಾಗಿದ್ದು, ವಾಹನ ಸವಾರರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ರಸ್ತೆಯಲ್ಲಿ ಪದೇ ಪದೇ ಕಾಡಾನೆ ಕಾಣಿಸಿಕೊಳ್ಳುತ್ತಿದ್ದು, ಆನೆ ರಸ್ತೆ ದಾಟುವವರೆಗೂ ಸವಾರರು ದೂರದಲ್ಲೇ ವಾಹನ ನಿಲ್ಲಿಸಿ ಕಾಯುತ್ತಿರುವ ವೀಡಿಯೋ ಇಲ್ಲಿದೆ.