ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಾರಕಕ್ಕೇರಿದ್ದು, ಬೇಲೂರು ತಾಲ್ಲೂಕಿನ ಅನುಘಟ್ಟ ಗ್ರಾಮದಲ್ಲಿ ಕಾಡಾನೆಯೊಂದು ಆಹಾರ ಅರಸಿ ಮನೆಗೇ ಬಂದಿದೆ. ಕಾಫಿ ತೋಟದೊಳಗಿಂದ ಮನೆಯ ಬಳಿ ಬಂದ ಒಂಟಿ ಹೆಣ್ಣಾನೆ, ಚಂದನ್ ಎಂಬುವವರ ಮನೆ ಮುಂದೆ ಆಹಾರಕ್ಕಾಗಿ ಹುಡುಕಾಡಿದೆ. ಏನೂ ಸಿಗದ ಕಾರಣ ಮನೆಯ ಗೇಟ್ ಮೂಲಕ ಹೊರ ಹೋಗಿದೆ. ವಿಡಿಯೋ ಮಾಡುತ್ತಿದ್ದುದನ್ನು ಕಂಡು ಘೀಳಿಟ್ಟಿದೆ. ಕಾಡಾನೆ ಓಡಾಟದ ವಿಡಿಯೋ ಚಂದನ್ ಅವರ ಮೊಬೈಲ್ನಲ್ಲಿ ಸೆರೆಯಾಗಿದೆ.