ಅಸ್ಸಾಂನ ನುಮಾಲಿಗಢ ಪ್ರದೇಶದಲ್ಲಿ ಕಾಡಾನೆಯೊಂದರ ಕುತ್ತಿಗೆಯಲ್ಲಿ ಟ್ರಾಕ್ಟರ್ನ ಭಾರಿ ಗಾತ್ರದ ಟೈರ್ ಸಿಲುಕಿಕೊಂಡು ಆನೆ ತೀವ್ರ ಯಾತನೆ ಅನುಭವಿಸುತ್ತಿದ್ದ ಘಟನೆಗೆ ಕೊನೆಗೂ ಸುಖಾಂತ್ಯ ಸಿಕ್ಕಿದೆ. ಆನೆಯು ಕುತ್ತಿಗೆಯಲ್ಲಿ ಟೈರ್ನೊಂದಿಗೆ ಓಡಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿ, ಸಾರ್ವಜನಿಕರಲ್ಲಿ ಭಾರಿ ಕಳವಳ ಮೂಡಿಸಿದ್ದವು.