ಚಾಮರಾಜನಗರದ ಮಂಚಹಳ್ಳಿ, ಚಿಕ್ಕರಂಗಶೆಟ್ಟಿ ದೊಡ್ಡಿ ಹಾಗೂ ವಿ.ಎಸ್.ದೊಡ್ಡಿಯಲ್ಲಿ ಕಾಡಾನೆ ದಾಂಧಲೆ ಮುಂದುವರಿದಿದೆ. ಹಾಡುಹಗಲೇ ಜಮೀನುಗಳಿಗೆ ನುಗ್ಗಿದ ಒಂಟಿ ಸಲಗ ಬೆಳೆ ನಾಶಪಡಿಸುತ್ತಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಹನೂರು ತಾಲ್ಲೂಕಿನ ವಿ.ಎಸ್.ದೊಡ್ಡಿಯಲ್ಲಿ ನಿವೃತ್ತ ಮಿಲಿಟರಿ ಅಧಿಕಾರಿಯ ತೋಟಕ್ಕೂ ಆನೆ ನುಗ್ಗಿದ್ದು, ಪರಿಹಾರಕ್ಕೆ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.