ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮುಂದುವರೆದಿದೆ. ಮಡಬೂರು ಗ್ರಾಮದ ಬಳಿ 17 ಆನೆಗಳು ಗುಂಪಾಗಿ ಓಡಾಟ ನಡೆಸಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಮಡಬೂರು ಬಳಿ 17 ಕಾಡಾನೆಗಳ ಹಿಂಡು ದಾಂಗುಡಿ ಇಟ್ಟಿದ್ದು, ಬಿಂದಾಸ್ ಆಗಿ ರಸ್ತೆ ದಾಟಿ ಓಡಾಟ ನಡೆಸಿವೆ.