ಚಾಮರಾಜನಗರ ಜಿಲ್ಲೆಯ ತಮಿಳುನಾಡು ಗಡಿಯಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ನಿರಂತರ ಓಡಾಟದಿಂದ ರೈತರಲ್ಲಿ ತೀವ್ರ ಆತಂಕ ಮನೆಮಾಡಿದೆ. ಅರಳವಾಡಿ, ತಾಳವಾಡಿ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಕೊಂಗಳ್ಳಿ ಗ್ರಾಮಕ್ಕೆ ಕಾಡಾನೆ ನುಗ್ಗಿ ಜನರನ್ನು ಭಯಭೀತಗೊಳಿಸಿದೆ. ಹುಲಿ ಮತ್ತು ಚಿರತೆಗಳ ಕಾಟದ ಜೊತೆಗೆ ಈಗ ಕಾಡಾನೆಗಳ ಹಾವಳಿಯಿಂದ ಗಡಿಭಾಗದ ಜನರು ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ.