ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಅರಣ್ಯ ವಲಯ ಮತ್ತು ಹೊಸಕೊಪ್ಪ ಗ್ರಾಮದ ಬಳಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. ಭದ್ರಾ ಹಿನ್ನೀರಿನ ಬಳಿ ಬೀಡುಬಿಟ್ಟಿರುವ ಆನೆಗಳು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ವಿಡಿಯೋದಲ್ಲಿ ಆನೆಯೊಂದು ಓಡಿಸಿಕೊಂಡು ಬರುವ ದೃಶ್ಯವಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.