ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ವಾಲ್ನೂರು ಗ್ರಾಮದ ರಾಮಪ್ಪ ಎಂಬುವರ ಮನೆ ಅಂಗಳಕ್ಕೆ ಬೆಳ್ಳಂಬೆಳಗ್ಗೆ ಒಂಟಿ ಸಲಗ ನುಗ್ಗಿದ್ದು, ಮನೆ ಮಂದಿ ಭೀತಿಯಿಂದ ಕಿರುಚಾಡಿದ್ದಾರೆ. ಆನೆಯಿಂದ ತಪ್ಪಿಸಿಕೊಳ್ಳಲು ಜನರು ಓಡಾಡುತ್ತಿರುವ ದೃಶ್ಯ ಆತಂಕ ಮೂಡಿಸಿದ್ದು, ತಕ್ಷಣವೇ ಈ ಕಾಡಾನೆಯನ್ನು ಕಾಡಿಗಟ್ಟುವಂತೆ ಸ್ಥಳೀಯ ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.