ಇಷ್ಟು ದಿನ ಅಮೆರಿಕನ್ ಡಾಲರ್ ವಿರುದ್ಧ ತೊಡೆ ತಟ್ಟಿದ್ದ ರಷ್ಯಾ, ಈಗ ಮತ್ತೆ ಡಾಲರ್ ಜೊತೆ ವಹಿವಾಟು ನಡೆಸಲು ಮುಂದಾಗಿದೆ. ಈ ಬೆಳವಣಿಗೆ ಚಿನ್ನದ ಮೇಲೂ ಪರಿಣಾಮ ಬೀರಲಿದೆ. ಇಷ್ಟು ದಿನ ಚಿನ್ನ ಖರೀದಿಸುತ್ತಿದ್ದ ಸೆಂಟ್ರಲ್ ಬ್ಯಾಂಕ್ಗಳು, ಈಗ ಚಿನ್ನದ ಮೇಲಿನ ನಂಬಿಕೆ ಕಳೆದುಕೊಂಡು, ಚಿನ್ನ ಮಾರಾಟ ಮಾಡಬಹುದು. ಇದರಿಂದ ಗೋಲ್ಡ್ ಬೆಲೆ 1 ಲಕ್ಷ ರೂ. ಕೆಳಗೆ ಬರಬಹುದು ಎನ್ನಲಾಗಿದೆ. 2027ರ ಅಂತ್ಯದ ವೇಳೆಗೆ, 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ಕೆಳಗೆ ಇಳಿಯಬಹುದು ಎನ್ನುತ್ತಿದ್ದಾರೆ ತಜ್ಞರು.